ಸಾಣೇಹಳ್ಳಿ ಕಲಾಸಂಘ


ಸಾಣೇಹಳ್ಳಿ ಹೊಸದುರ್ಗ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಸುಮಾರು ೩೦೦ ಮನೆಗಳಿದ್ದು ೧೫೦೦ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಶ್ರಿÃ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದ್ದು ೧೯೭೭ ಡಿಶಂಬರ್ ೨೫ರಂದು ಈ ಮಠಕ್ಕೆ ತರಳಬಾಳು ಜಗದ್ಗುರು ಶ್ರಿÃ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರಿÃ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ಪಟ್ಟಾಧ್ಯಕ್ಷರನ್ನಾಗಿ ಮಾಡಿದರು. ಅದುವರೆಗೂ ಅನಾಮಧೇಯವಾಗಿದ್ದ ಈ ಗ್ರಾಮಕ್ಕೆ ಚೈತನ್ಯ ಬಂದಂತಾಗಿ ಧರ್ಮ, ಸಾಹಿತ್ಯ, ಸಂಗೀತ, ಕಲೆ ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ಪೂಜ್ಯರ ಸಮ್ಮುಖದಲ್ಲಿ ನಡೆಯಲಾರಂಭಿಸಿದವು. ಇದಕ್ಕೆ ಇನ್ನಷ್ಟು ಹೊಸ ರೂಪ ಕೊಡುವ ನಿಟ್ಟಿನಲ್ಲಿ ಪೂಜ್ಯ ಶ್ರಿÃಗಳವರು ೧೯೮೭ರಲ್ಲಿ ತಮ್ಮ ಪರಮಾರಾಧ್ಯ ಗುರುಗಳವರ ಗೌರವಾರ್ಥ ಪ್ರಾರಂಭಿಸಿದ್ದೆÃ `ಶ್ರಿÃ ಶಿವಕುಮಾರ ಕಲಾಸಂಘ'.

ಸಾಣೇಹಳ್ಳಿಯಲ್ಲಿರುವ ಪ್ರೌಢಶಾಲೆಯ ನೌಕರರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಆಸಕ್ತ ಯುವ ಪಡೆಯನ್ನು ಬಳಸಿಕೊಂಡು ಹೊಸ ಹೊಸ ನಾಟಕಗಳನ್ನು ಆಧುನಿಕ ತಂತ್ರ ಅಳವಡಿಸಿಕೊಂಡು ಪ್ರದರ್ಶಿಸುವ ಕಾರ್ಯ ನಡೆಯಿತು. ಪ್ರಖ್ಯಾತ ರಂಗಭೂಮಿಯ ನಿರ್ದೇಶಕ ಅಶೋಕ ಬಾದರದಿನ್ನಿ, ಧೃವರಾಜ ದೇಶಪಾಂಡೆ, ವಿಶ್ವೆÃಶ್ವರಿ ಬಸವಲಿಂಗಯ್ಯ, ವೈ ಡಿ ಬದಾಮಿ, ಮಂಜುಳ ಬದಾಮಿ ಹೀಗೆ ಹಲವಾರು ಪ್ರತಿಭಾನ್ವಿತರು ಸಾಣೇಹಳ್ಳಿಯ ಕಲಾವಿದರಿಗೆ ನಾಟಕಗಳನ್ನು ನಿರ್ದೇಶಿಸಿದರು. ಕಲಾವಿದರು ಸಾಣೇಹಳ್ಳಿಯಲ್ಲಿ ಮಾತ್ರವಲ್ಲದೆ ಟ್ರಾö್ಯಕ್ಟರ್‌ನಲ್ಲಿ ಕೂತು ಬೇರೆ ಬೇರೆ ಸ್ಥಳಗಳಿಗೂ ಹೋಗಿ ನಾಟಕ ಅಭಿನಯಿಸಲಾರಂಭಿಸಿದರು. ಚೋರ ಚರಣದಾಸ, ಬಾವಿ ಕಳೆದಿದೆ, ಉರಿಲಿಂಗ ಪೆದ್ದಿ, ಬೆಪ್ಪತಕ್ಕಡಿ ಬೋಳೇಶಂಕರ, ವಧೂಟಿ, ಮರಣವೇ ಮಹಾನವಮಿ, ಜಂಗಮದೆಡೆಗೆ, ಮಹಾಬೆಳಗು ಮುಂತಾದ ೬೦ಕ್ಕೂ ಹೆಚ್ಚು ನಾಟಕಗಳ ಸಾವಿರಾರು ಪ್ರದರ್ಶನಗಳನ್ನು ಕಲಾಸಂಘದ ಕಲಾವಿದರು ನೀಡಿದ್ದಾರೆ. ಈಗಲೂ ವರ್ಷಕ್ಕೆ ಹತ್ತಾರು ಕಡೆ ಹೋಗಿ ನಾಟಕಗಳನ್ನು ಅಭಿನಯಿಸುತ್ತಲಿದ್ದಾರೆ.

ಕಲಾಸಂಘ ೨೯ ವರ್ಷಗಳ ಅವಧಿಯಲ್ಲಿ ಶಿವಸಂಚಾರ, ಭಾರತ ಸಂಚಾರ, ಶಿವದೇಶ ಸಂಚಾರ, ಬಸವ ಸಂಚಾರ, ಬೀದಿ ನಾಟಕಗಳು ಮುಂತಾದ ಯೋಜನೆಯಡಿ ದೇಶದಲ್ಲಿ ಮಹತ್ವದ ರಂಗಕ್ರಾಂತಿ ಮತ್ತು ದಾಖಲೆ ನಿರ್ಮಿಸಿದೆ. ಅಲ್ಲದೆ ವಚನಗಳನ್ನು ಹಾಡುವ ತಂಡವಿದ್ದು ಬೇರೆ ಬೇರೆ ಕಡೆ ಹೋಗಿ ಸುಶ್ರಾವ್ಯವಾಗಿ ವಚನಗಳನ್ನು ಹಾಡುವರು. ಪ್ರತಿವರ್ಷ ನವೆಂಬರ್‌ನಲ್ಲಿ ರಾಷ್ಟಿçÃಯ ನಾಟಕೋತ್ಸವ ನಡೆಯುವುದು. ವಿಚಾರ ಸಂಕಿರಣ, ವರ್ಷದ ಹರ್ಷ, ಸಿಜಿಕೆ ಸ್ಮರಣೆ, ಪುಸ್ತಕ ಪ್ರಕಟಣೆ, ರಂಗತರಬೇತಿ ಶಿಬಿರ, ಶ್ರಿà ಶಿವಕುಮಾರ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಹೀಗೆ ಹಲವಾರು ಕಾರ್ಯ ಚಟುವಟಿಕೆಗಳಿಂದಾಗಿ ಸಾಣೇಹಳ್ಳಿ `ರಂಗಕಾಶಿ' ಎನ್ನುವ ಗೌರವಕ್ಕೆ ಕಾರಣವಾಗಿದೆ. ಲಕ್ಷಾಂತರ ಜನರು ಈ ಕಾರ್ಯಕ್ರಮಗಳಲ್ಲಿ ಸ್ವಯಂಪ್ರೆÃರಿತರಾಗಿ ಭಾಗವಹಿಸಿ ಸಂತೋಷಪಡುವರು. ಸದಾ ಚಲನಶೀಲವಾಗಿರುವುದೇ ಸಂಘದ ಶಕ್ತಿ